ನಿನ್ನಂತೆ ಬದುಕಬೇಕು

 



ಹೆಸರು ಹೇಳಿದರೆ ನೆನಪಾಗಿ ನಿನ್ನ ನಗು ಮುಖ 

ಬೇಡಿ ಬಂದವರಿಗೆ ನಿನ್ನದೇ ಸಹಾಯ ಹಸ್ತ

ಅಪ್ಪು ಹೆಸರಲ್ಲಿ ಅಪ್ಪಿದ ಚಿತ್ರಲೋಕ 

ದೇವರಿಗೂ ಪ್ರಿಯ ನಿನ್ನ ಹೃದಯ ಪುನೀತ 

ಅಪ್ಪು ಅಂದ ತಕ್ಷಣ ನೆನಪಾಗಿದೆ ಅವರ ನಗು , ಅವರ ಸಿನಿಮಾ ನೋಡಿಡದಿರುವ ಮಂದಿ ಇಲ್ಲ , ಆದರೆ ಅಪ್ಪು ಅವರು ಸಿನಿಮಾಗಿಂತಲೂ ಅವರ ನಡೆ ನುಡಿಗಳಿಗೆ ಹೆಚ್ಚು ಇಷ್ಪಡುತ್ತಾರೆ ಜನ.

ದೊಡ್ಡಮನೆ ಹುಡುಗ ಎಂಬ ಹೆಮ್ಮೆ ಇದ್ದರೂ
ಎಂದು ತೋರಿಕೊಳ್ಳದ ಮುಗ್ಧ ಮನುಷ್ಯ . ಚಿಕ್ಕವರು ದೊಡ್ಡವರು ಎಲ್ಲರನ್ನೂ ಗೌರವಿಸುವ ಸಹೃದಯಿ . ಕರ್ನಾಟಕ ಸರ್ಕಾರ ಎಷ್ಟು ಬಾರಿ ಕರೆದರು ತನ್ನ ಸಹಾಯ ಹಸ್ತ ನೀಡುತ್ತಿದ್ದ ಕೊಡುಗೈ ದಾನಿ . ಏಷ್ಟೋ ಅನಾಟರು ಏಷ್ಟೋ ವಿದ್ಯಾರ್ಥಿಗಳಿಗೆ ಬೆಳಕು ತುಂಬಿದ ದೀಪ.




ತನ್ನ ಕೊನೆ ಕ್ಷಣದಲ್ಲೂ ನೆತ್ರದಾನ ಮಾಡಿದ ಆದರ್ಶ ವ್ಯಕ್ತಿ . ಗುಂಪುಗಾರಿಕೆ ಇಲ್ಲ , ಎಲ್ಲರೂ ನಮ್ಮವರೇ ಎಂದು ಬದುಕಿದ ದೊಡ್ಡಮನೆ ಹುಡುಗ . ಪೂರ್ತಿ ಕರುನಾಡು ಕಣ್ಣೀರಲ್ಲಿ ಇರುವುದು ಇವರೊಬ್ಬ ಸಿನಿಮಾ ನಟ ಎಂದಲ್ಲ ಇವರೊಬ್ಬ ದೇವತಾ ಮನುಷ್ಯ ಎಂದು . 



ಪರಮಾತ್ಮ ಸಿನಿಮಾ ಇನ್ನೂ ಸಹ ನನ್ನ ಮೆಚ್ಚಿನ ಸಿನಿಮಾ, ಆದರೆ ಅತಿ ಚಿಕ್ಕ ವಯಸ್ಸಿನಲ್ಲೇ ನಿನ್ನ ಮರಮತ್ಮ ಮಾತಾಡುವುದು ನಿಲ್ಲಿಸಿದ . ನಿನ್ನಂತೆ ಬದುಕ ಬೇಕು ಎಂಬ ಬಯಕೆ ನನ್ನದಾಗಿದೆ . ಈ ಪ್ರೀತಿಗೆ ಕರುನಾಡು ಚಿರಋಣಿ . 

ಇಷ್ಟೊಂದು ಕಣ್ಣೀರು ನಿನಗಾಗಿ ಏಕೆಂದರೆ ನನ್ನ ಹೃದಯ ಪುನೀತ.

Comments

Popular posts from this blog

Hope for a jump in Automobile sector Amid Covid-19

Fear , Fear of hunger!!